Index   ವಚನ - 50    Search  
 
ಕೊರಡು ಕೊನರಬಲ್ಲುದೆ? ಬರಡು ಹಯನಾಗಬಲ್ಲುದೆ? ಕುರುಡಗೆ ಕನ್ನಡಿಯ ತೋರಿಸಿದರೆ ನೋಡಬಲ್ಲನೆ? ಮೂಕಂಗೆ ರಾಗವು ಹೊಳೆದರೆ ಹಾಡಬಲ್ಲನೆ? ಹೆಗ್ಗ ಬುದ್ಧಿಯ ಬಲ್ಲನೆ? ಲೋಗರಿಗೆ ಉಪದೇಶವ ಕೊಟ್ಟರೆ ಶಿವಭಕ್ತರಾಗಬಲ್ಲರೆ? ಶಿವಸತ್ಪದಸಂಪನ್ನರಾಗಲಲ್ಲದೆ ಶಿವಾಚಾರ ಆಳವಡದು ನೋಡಾ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.