Index   ವಚನ - 51    Search  
 
ಕೆರೆಯನೊಡೆದ ಬಳಿಕ ತೂಬು ತಡೆಯಬಲ್ಲುದೆ? ಒಡಕ ಮಡಕೆಗೆ ಒತ್ತಿ ಮಣ್ಣ ಕೊಟ್ಟರೆ ನಿಲ್ಲಬಲ್ಲುದೆ? ಮುತ್ತೊಡೆದರೆ ಬೆಚ್ಚಬಲ್ಲುದೆ? ಚಿತ್ತ ಒಡೆದರೆ ಭಕ್ತಿ ಬೀಸರವಲ್ಲದೆ ಮುಕ್ತಿಯೆಲ್ಲಿಯದೊ? ಕತ್ತೆಯ ಸೂಳೆಯ ಮಕ್ಕಳಿರಾ ಸತ್ತಹಾಗೆ ಸುಮ್ಮನಿರಿರೊ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.