Index   ವಚನ - 54    Search  
 
ಶೀಲ ಶೀಲವೆಂದೇನೊ? ಶೀಲವಂಥಾ ಸೂಲವೆ? ಶುದ್ಧ ಹರಿವ ನೀರನು ನೂಲರಿವೆ ಸುತ್ತಿಯದ ಕಟ್ಟಿ ತಂದದ್ದು ಶೀಲವೆ ? ಅದಲ್ಲ ನಿಲ್ಲು ಮಾಣು. ಜ್ವಾಲೆಯಂದದಿ ಹರಿವ ಮನವನು ಖತಿ ಹೋಗದ ಹಾಗೆ ಕಟ್ಟಿ ನಿಲಿಸಿದುದೆ ಶೀಲ. ಬಾಲೆಯರ ಬಣ್ಣದ ಬಗೆಗೆ ಭ್ರಮೆಗೊಳ್ಳದುದೆ ಶೀಲ. ಕಾಲಕರ್ಮಂಗಳ ಗೆದ್ದುದೆ ಶೀಲ. ಇಂತಲ್ಲದೆ ಉಳಿದುವೆಲ್ಲ ದುಶ್ಶೀಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.