ಧೂಳಿಪಾವುಡ, ಸರ್ವಾಂಗಪಾವುಡ,
ಸಮಯಾಚಾರ, ಸಹಭೋಜನವೆಂಬ
ಶೀಲವಂತರು ನೀವು ಕೇಳಿರೊ.
ಗಾಳಿಗೂಳಿತನವ ಬಿಟ್ಟುದೆ ಧೂಳಿಪಾವುಡ.
ಸರ್ವ ಗರ್ವವನಳಿದು ನಿಗರ್ವವಾದುದೆ ಸರ್ವಾಂಗಪಾವುಡ.
ಸಮತೆ ಸೈರಣೆ ಉಳ್ಳುದೆ ಸಮಯಾಚಾರ.
ಶರಣಸತಿ ಲಿಂಗಪತಿಯಾದುದೆ ಸಹಭೋಜನ.
ಇಂತಲ್ಲದೆ ಸಂತೆಯ ಸೂಳೆಯಂತೆ
ಬಂದವರ ಸಂತವಿಟ್ಟು ತಾವು ಮುನ್ನಿನಂತೆ ಇರುವ
ಭ್ರಾಂತು ಭ್ರಮಿತ ವ್ರತಿ ಗಿತಿಗಳಿಗೆ ಶೀಲವೆಲ್ಲಿಯದೊ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Art
Manuscript
Music
Courtesy:
Transliteration
Dhūḷipāvuḍa, sarvāṅgapāvuḍa,
samayācāra, sahabhōjanavemba
śīlavantaru nīvu kēḷiro.
Gāḷigūḷitanava biṭṭude dhūḷipāvuḍa.
Sarva garvavanaḷidu nigarvavādude sarvāṅgapāvuḍa.
Samate sairaṇe uḷḷude samayācāra.
Śaraṇasati liṅgapatiyādude sahabhōjana.
Intallade santeya sūḷeyante
bandavara santaviṭṭu tāvu munninante iruva
bhrāntu bhramita vrati gitigaḷige śīlavelliyado? Illa,
akhaṇḍa paripūrṇa ghanaliṅgaguru
cennabasavēśvara śivasākṣiyāgi.