Index   ವಚನ - 63    Search  
 
ಹಡಪ ಚಾಮರ ಸುರಗಿ ರಜಬೋವರಿಗೆ ಧೂಪ ವಚನ ಕನ್ನಡಿ ಗುಂಡಿನಕಾಯಕವೆಂಬ ಮಂದಚಾರಿಗಳು ನೀವು ಕೇಳಿರೊ. ಒಡಲಾಸೆಯಳಿದುದೆ ಹಡಪದಕಾಯಕ. ಚಂಚು ವಂಚನೆಯ ಬಿಟ್ಟುದೆ ಚಾಮರದಕಾಯಕ. ಪರವನಿತೆಯರ ಆಸೆಯಳಿದುದೆ ಸುರಗಿಯಕಾಯಕ. ಋಣ ರುಜೆಯಿಲ್ಲದುದೆ ರಜಬೋವರಿಗೆಕಾಯಕ. ದುಸ್ಸಂಗ ದುಸ್ವಪ್ನ ದುರ್ವಾಸನೆಯಳಿದುದೆ ಧೂಪದಕಾಯಕ. ರಚ್ಚೆ ರಚನೆಯಳಿದುದೆ ವಚನಕಾಯಕ. ಪರವಧುವ ನೋಡದಿಪ್ಪುದೆ ಕನ್ನಡಿಯಕಾಯಕ. ತೊಂಡು ತೊಳಸು ಮುಂಡು ಮುರುಹು ಭಂಡ ಬೂತು ದಿಂಡೆಯತನ ಕೊಂಡೆಯವಳಿದುದೆ ಗುಂಡಿಗೆಯಕಾಯಕ. ಇಂತಲ್ಲದೆ ಕಂಡಕಂಡವರ ಕೊಂಡಾಡದೆ ಇದ್ದರೆ ಬಂಡುಗೆಲವ ಮಂಡ ಮೂಕೊರೆಯ ಭಂಡ ಬಹುಕಳ್ಳರಿಗೆ ಕಾಯಕ ಸಲ್ಲದು. ಭಕ್ತಿ ಮುಕ್ತಿಯಿಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.