ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ
ಕುನ್ನಿಗಳಿರ ನೀವು ಕೇಳಿರೊ.
ನಿಮಗೆ ಗುರುವಿಲ್ಲ.
ಅದೇನು ಕಾರಣವೆಂದರೆ, ಅವಳಿಗೆ ಪಾದೋದಕ ಪ್ರಸಾದವಿಲ್ಲ ;
ಅವಳಿಗೆ ಮತವಿಲ್ಲ ; ಧರ್ಮದ ದಾರಿಯೆಲ್ಲಾ ದುರ್ಧರ.
ಆ ದುರಾಚಾರಿಯನಾಳುವ ಹೊಲೆಯರಿಗೆ
ಗುರುಲಿಂಗಜಂಗಮದ ಪಾದೋದಕ ಪ್ರಸಾದವಿಲ್ಲ.
ಅವನಿಗೆ ಆ ಹೆಂಡತಿಯೆ ತನ್ನ ಗುರುವೆಂದು
ಮುನ್ನಿನ ತನ್ನ ಗುರುವ ಬಿಡುವ ಗನ್ನಘಾತಕ
ಕುನ್ನಿ ಕುಲಹೀನರಿಗೆ ಭಕ್ತಿಮುಕ್ತಿಯೆಲ್ಲಿಯದೊ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.