Index   ವಚನ - 85    Search  
 
ಸದಾವರ್ತೆಯಕೊಡುವ ಸದಾವರ್ತಿಗಳು ನೀವು ಕೇಳಿರೊ. ಉದಯಾಸ್ತಮಾನದೊಳು ಬಂದವರ ಸದನದ ಮುಂದೆ ನಿಲಿಸಿಕೊಂಡು ಹದವಿಗೆ ಹಾಕಿ ಮಾಡುವ ಮಾಟ ಸದಾವರ್ತೆಯೆ? ಅಲ್ಲ. ಇದು ಕಾರಣ ಬಂದ ಬರವ ನಿಂದ ನಿಲುಕಡೆಯನರಿತು ಮಾಡುವುದೆ ಸದಾವರ್ತೆ. ಇಂತಲ್ಲದಿದ್ದರೆ ಅದು ಸದಾವರ್ತೆಯಲ್ಲ. ಅವನ ಮನೆಯ ಅನ್ನ ಸೆದೆ ಸೊಪ್ಪು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.