ಹಲುಬಿ ದಯದ ದಾಸೋಹವ ಮಾಡುವ
ನಿರಾಸ್ಕರರು ನೀವು ಕೇಳಿರೊ.
ಕೇಶ ಜಡೆ ಬೋಳಿನವರ ಕಂಡು
ಓಸರಿಸದೆ ಮಾಡುವುದು ದಾಸೋಹ.
ಅವರಲ್ಲಿ ಆಸೆ ನಿರಾಸೆಯ ನೋಡದೆ
ಸರ್ವೇಶ್ವರನ ಶರಣರಿಗೆ ಮಾಡುವುದೆ ದಾಸೋಹ.
ಇಂತಲ್ಲದಿರ್ದಡೆ ಅವನ ಮನೆಯ
ವೇಶಿಯ ಮನೆಯಹೊಕ್ಕು ಹೊರಟಂತಾಯಿತ್ತು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.