ಬಿಂಗಕ್ಕೆ ಹೊರೆಯಲ್ಲದೆ
ನಿಜಶಿಲೆಯ ದೀಪ್ತಿಯ ತರಂಗಕ್ಕೆ
ಹೊರೆ ಹೊರೆಯುಂಟೆ?
ಸಂಸಾರಿಗೆ ಪ್ರಕೃತಿ ರಾಗದ್ವೇಷಂಗಳಲ್ಲದೆ
ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ
ಈ ಉಭಯದ ಸಂದುಂಟೆ?
ಈ ಗುಣದಂಗಲಿಂಗಾಂಗಿಯ ಸಂಗ
ಮಹಾಮಹಿಮ ಮಾರೇಶ್ವರಾ.
Art
Manuscript
Music
Courtesy:
Transliteration
Biṅgakke horeyallade
nijaśileya dīptiya taraṅgakke
hore horeyuṇṭe?
Sansārige prakr̥ti rāgadvēṣaṅgaḷallade
manavu mahadalli ninda nijaliṅgāṅgige
ī ubhayada sanduṇṭe?
Ī guṇadaṅgaliṅgāṅgiya saṅga
mahāmahima mārēśvarā.