ಭಕ್ತಂಗೆ ಮಹಿಮೆ ಮಾಹೇಶ್ವರಂಗೆ ದೃಷ್ಟ
ಪ್ರಸಾದಿಗೆ ನಿಷ್ಠೆ ಪ್ರಾಣಲಿಂಗಿಗೆ ಅವಧಾನ
ಶರಣಂಗೆ ಸರ್ವಗುಣ ಸಂತೋಷ
ಐಕ್ಯಂಗೆ ಪರಿಪೂರ್ಣತ್ವ
ಇಂತೀ ಷಡುಸ್ಥಲವನಾಧರಿಸಿ ನಡೆವಲ್ಲಿ
ಹುಸಿ ಕೊಲೆ ಕುಹಕ ಕ್ಷುದ್ರ ಅಟಮಟ ಠಕ್ಕು ಠವಾಳ
ಪಿಸುಣತ್ವ ಅಸತ್ಯ ವಿಶ್ವಾಸಘಾತಕ
ಪರವಧು ಪರಾಪೇಕ್ಷೆ ಪರನಿಂದೆ
ಇಂತಿವರೊಳಗಾದ ನಾನಾ ಬಂಧವ ಬಿಟ್ಟು
ನಿಂದ ಸ್ಥಲಕ್ಕೆ ಸಂದುಸಂಶಯವಿಲ್ಲದೆ
ಅರ್ತಿಕಾರಿಕೆಯಲ್ಲಿ ಮತ್ತೊಂದುವ ಹಿಡಿಯದೆ
ಲೆತ್ತ ಚದುರಂಗ ಪಗಡೆ ಪಗುಡಿ ಪರಿಹಾಸಕರಲ್ಲಿ
ಚಚ್ಚಗೋಷ್ಠಿಯಲ್ಲಿ ನಿಲ್ಲದೆ
ನಿತ್ಯನೇಮಂಗಳ, ಸತ್ತು ಚಿತ್ತು ಆನಂದಗಳೆಂಬ
ತ್ರಿವಿಧಮಂ ತಿಳಿದು
ನಿಂದ ನಿಶ್ಚಿಂತರಲ್ಲಿ ಸರ್ವಸಂಗ ಪರಿತ್ಯಾಗವ ಮಾಡಿ
ನಿಂದ ನಿರಂಗಿಗಳಲ್ಲಿ ಲಿಂಗಾರ್ಚನೆ ಪೂಜೆ
ತಪ್ಪದೆ ಮಾಡುವ ನಿಶ್ಚಿಂತರಲ್ಲಿ
ಜಪತಪನೇಮ ನಿತ್ಯ ತತ್ಕಾಲವನರಿವ ಸಾವಧಾನಿಗಳಲ್ಲಿ
ಎರಡಿಲ್ಲದೆ ಕೂಡೂದು ಸದ್ಬಾವವಂತನ ಸಂಬಂಧ.
ಆತ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ.
Art
Manuscript
Music
Courtesy:
Transliteration
Bhaktaṅge mahime māhēśvaraṅge dr̥ṣṭa
prasādige niṣṭhe prāṇaliṅgige avadhāna
śaraṇaṅge sarvaguṇa santōṣa
aikyaṅge paripūrṇatva
intī ṣaḍusthalavanādharisi naḍevalli
husi kole kuhaka kṣudra aṭamaṭa ṭhakku ṭhavāḷa
pisuṇatva asatya viśvāsaghātaka
paravadhu parāpēkṣe paraninde
intivaroḷagāda nānā bandhava biṭṭu
ninda sthalakke sandusanśayavillade
artikārikeyalli mattonduva hiḍiyade
letta caduraṅga pagaḍe paguḍi parihāsakaralli
Caccagōṣṭhiyalli nillade
nityanēmaṅgaḷa, sattu cittu ānandagaḷemba
trividhamaṁ tiḷidu
ninda niścintaralli sarvasaṅga parityāgava māḍi
ninda niraṅgigaḷalli liṅgārcane pūje
tappade māḍuva niścintaralli
japatapanēma nitya tatkālavanariva sāvadhānigaḷalli
eraḍillade kūḍūdu sadbāvavantana sambandha.
Āta kūgiṅge horagu
mahāmahima mārēśvarā.