ಶಿವನಿಂದಧಿಕ ದೈವ ಇಲ್ಲ,
ಶಿವಭಕ್ತಂಗಧಿಕ ಕುಲಜನಿಲ್ಲವೆಂದು
ಹೇಳುವುವು ಆಗಮ ಶ್ರುತಿ.
ಅದು ಎಂತೆಂದಡೆ:
ಸರ್ವ ಅಪ್ಸರರು ಸರ್ವ ಗಂಧರ್ವರು
ಸರ್ವ ಯತಿಗಳು ಸರ್ವ ಜತಿಗಳು
ಎಲ್ಲಾರು, ಎಲಾ ಈ ಶಿವಲಿಂಗಮಂ ಪೂಜಿಸಿ
ಮೋಕ್ಷವ ಪಡೆದೆನೆಂಬೋ ಭಕ್ತರು ನೀವು ಕೇಳಿರಯ್ಯಾ:
ಈ ಶಿವಲಿಂಗಮಂ ಬ್ರಹ್ಮ ಪೂಜಿಸಿ ಭವ ಹಿಂಗಿಸಿದ;
ವಿಷ್ಣು ಪೂಜಿಸಿ ಹತ್ತು ಅವತಾರದ ದೋಷವನೀಡಾಡಿದ;
ಇಂದ್ರ ಪೂಜಿಸಿ ಅಯಿಶ್ವರ್ಯಮಂ ಪಡೆದ;
ಋಷಿಗಳು ಪೂಜಿಸಿ ಕುಲವಂ ಕಳೆದು
ಬ್ರಹ್ಮರೆನಿಸಿ ನಿಶ್ಚಿಂತರಾದರು;
ಮಹಾಗಣಾಧೀಶ್ವರರೂ ಪೂಜಿಸಿ
ಕೈಲಾಸಕ್ಕೆ ಸೋಪಾನವ ಕಟ್ಟಿದರು;
ಮಿಕ್ಕ ನರರು ಪೂಜಿಸಿ [ಸು]ರಲೋಕವನೈದಿದರೆಂಬೋ
ಶಾಸ್ತ್ರವಂ ಕೇಳಿ, ಓದಿ, ಹಾಡಿ, ತಿಳಿದು,
ಪರಮ ವಿರಕ್ತಿಯ ನಿಟ್ಟಿಸಲಾರದೆ
ಪರದೈವಕಡ್ಡ ಬಿದ್ದು
ಹಿಂದೆ ಅವ ಕಟ್ಟಿದ ಲಿಂಗವು
ಕೋಣನ ಕೊರಳಿಗೆ ಗುದಿಗೆ ಕಟ್ಟಿದಂತಾಯಿತು ಕಾಣಾ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Śivanindadhika daiva illa,
śivabhaktaṅgadhika kulajanillavendu
hēḷuvuvu āgama śruti.
Adu entendaḍe:
Sarva apsararu sarva gandharvaru
sarva yatigaḷu sarva jatigaḷu
ellāru, elā ī śivaliṅgamaṁ pūjisi
mōkṣava paḍedenembō bhaktaru nīvu kēḷirayyā:
Ī śivaliṅgamaṁ brahma pūjisi bhava hiṅgisida;
viṣṇu pūjisi hattu avatārada dōṣavanīḍāḍida;
indra pūjisi ayiśvaryamaṁ paḍeda;
r̥ṣigaḷu pūjisi kulavaṁ kaḷedu
brahmarenisi niścintarādaru;
mahāgaṇādhīśvararū pūjisi
kailāsakke sōpānava kaṭṭidaru;Mikka nararu pūjisi [su]ralōkavanaididarembō
śāstravaṁ kēḷi, ōdi, hāḍi, tiḷidu,
parama viraktiya niṭṭisalārade
paradaivakaḍḍa biddu
hinde ava kaṭṭida liṅgavu
kōṇana koraḷige gudige kaṭṭidantāyitu kāṇā
kūḍalādi cannasaṅgamadēvā