ಅಯ್ಯಾ, `ಬ್ರಹ್ಮಲಿಖಿತವೇ ದೊಡ್ಡಿತ್ತು' ಎಂದು ಪೇಳುವಿರಿ,
'ಬ್ರಹ್ಮಲಿಖಿತಕ್ಕೆ [ಇದಿರು] ಯಾರಾರು ಇಲ್ಲ' ವೆಂದು ಹೇಳುವಿರಿ,
ನೀವು ಕೇಳಿರಯ್ಯಾ:
ಇಂಥ ಬ್ರಹ್ಮಲಿಖಿತವ ಗೆದ್ದವರು
ನಮ್ಮ ಶಿವಗಣಾಧೀಶ್ವರರಲ್ಲದೆ
ಮಿಕ್ಕಿನವರು ಗೆದ್ದದ್ದು ಇಲ್ಲಾ ಕಾಣಿರಯ್ಯಾ!
ಅದು ಎಂತೆಂದಡೆ:
ಎಲೆ, ಬ್ರಹ್ಮನು ಶಿವನಂ ಕಾಣಲರಿಯದೆ
ತತ್ತ್ವಸಾರವ ತಿಳಿಯಲರಿಯದೆ
ಶಿರವ ಭೇದಿಸಿಕೊಂಡ.
ಇಂಥ ಬ್ರಹ್ಮಮುಖವಾದ ವೇದಗಳು
ರಥಕ್ಕೆ ವಾಜಿಯಾಗಿ ಹೋದವು.
ಇಂಥಾತ್ಮನು ತತ್ತ್ವಸಾರವ ತಿಳಿಯದೆ, ಅರಿಯದೆ,
ನಿಜವಸ್ತುವಾದ ಲಿಂಗಮಂ ಮರೆದು,
ಶಿರವ ಭೇದಿಸಿಕೊಂಡ.
ಅವ ನಮ್ಮ ಪ್ರಮಥ ಗಣಾಧೀಶ್ವರರಿಗೆ
ಅದೃಷ್ಟವ ಬರೆವುದಕ್ಕೆ ಕಾರಣಕರ್ತನೆ?
ಅಥವಾ ಆ ಕ್ಷಣ ಮಾತ್ರದಲ್ಲಿ
ಪುತ್ರಜನನವಾದ ಕಾಲದಲ್ಲಿಯು
ಬ್ರಹ್ಮನ ಬರ [ಹ ಹೋ]ಹಾಗಾಗಲಿಯೆಂದು,
ಮಹಾಗುರುವು ಬಂದು
ತ್ರಿಪುಂಡ್ರವಾದ ಮೂರು ಬೆರಳಿಂದ
ಬ್ರಹ್ಮಲಿಖಿತವಂ ದಟ್ಟಿಸಿ ಪಣೆಗಿಟ್ಟು,
ಮಾಂಸಪಿಂಡವಂ ಪೋಗಿ[ಸಿ]
ಮಂತ್ರಪಿಂಡವ ಮಾಡುವರಲ್ಲದೆ
ಮಿಕ್ಕವರಿಂದಾಗದು ಕಾಣಿರಯ್ಯಾ.
ಆ ಪ್ರಮಥ ಗಣಾಧೀಶ್ವರರು
ನಡೆದರೆಂದು ಈಗ ಮನುಜರು
'ನಾನೂ ನಡೆದೇನು' 'ನೀನೂ ನಡೆದೇನು' ಎಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Ayyā, `brahmalikhitavē doḍḍittu' endu pēḷuviri,
'brahmalikhitakke [idiru] yārāru illa' vendu hēḷuviri,
nīvu kēḷirayyā:
Intha brahmalikhitava geddavaru
nam'ma śivagaṇādhīśvararallade
mikkinavaru geddaddu illā kāṇirayyā!
Adu entendaḍe:
Ele, brahmanu śivanaṁ kāṇalariyade
tattvasārava tiḷiyalariyade
śirava bhēdisikoṇḍa.
Intha brahmamukhavāda vēdagaḷu
rathakke vājiyāgi hōdavu.
Inthātmanu tattvasārava tiḷiyade, ariyade,
nijavastuvāda liṅgamaṁ maredu,
śirava bhēdisikoṇḍa.Ava nam'ma pramatha gaṇādhīśvararige
adr̥ṣṭava barevudakke kāraṇakartane?
Athavā ā kṣaṇa mātradalli
putrajananavāda kāladalliyu
brahmana bara [ha hō]hāgāgaliyendu,
mahāguruvu bandu
tripuṇḍravāda mūru beraḷinda
brahmalikhitavaṁ daṭṭisi paṇegiṭṭu,
mānsapiṇḍavaṁ pōgi[si]
mantrapiṇḍava māḍuvarallade
mikkavarindāgadu kāṇirayyā.
Ā pramatha gaṇādhīśvararu
naḍedarendu īga manujaru
'nānū naḍedēnu' 'nīnū naḍedēnu' endu tiruguva
mūḷa holeyara mukhava nōḍalāgadu kāṇā
kūḍalādi cannasaṅgamadēvā