Index   ವಚನ - 19    Search  
 
ಬೇವಿನ ಮರದಲ್ಲಿ ಕಾಗೆ ಮನೆಯ ಮಾಡಿತ್ತು. ಕೋಗಿಲೆ ಮರಿಯ ಹಾಕಿತ್ತು. ಗೂಗೆ ಆರೈಕೆಯ ಮಾಡಿ ಸಾಕಿತ್ತು. ಹಂಸೆ ತಂಬೆಲರ ಕುಟುಕ ಕೊಟ್ಟು ಸಂಭ್ರಮವ ಮಾಡಿತ್ತು. ಅದು ಆರ ಹಂಗಿಲ್ಲದೆ ಹಾರಿ ಹೋಗುತ್ತ ಎನಗೆ ಬೇವಿನ ಮರನೆ ತಾಯಿಯೆಂದಿತ್ತು ಹಾಗೆಂದುದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.