Index   ವಚನ - 58    Search  
 
ತನಗೆ ಇದಿರಾದ ಗುರುವ ಕಳೆದು ತಾನು ಗುರುವಾಗಿ ಗುರುವಾಗಬೇಕು. ತಾ ಹರಕರಜಾತನಾಗಿ ನಿಂದು ತನ್ನಯ ಭೃತ್ಯರ ಗುರುಕರಜಾತನ ಮಾಡಬೇಕು. ತನ್ನಯ ಗುಣ ಜಡ, ಇದಿರಿಗೆ ಅಜಡವ ಹೇಳುವ ನರ ಭಿನ್ನ ಕಾರುಕಂಗೆ ಸದ್ಗುರುಸ್ಥಲವಿಲ್ಲ. ಅದ ಅವನರಿಯ, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.