Index   ವಚನ - 78    Search  
 
ಪುಟ್ಟಿದ ಮರದಲ್ಲಿ ಹಾರಿದ ಪಕ್ಷಿ ತಲೆದೋರುತ್ತದೆ. ಆಗದ ಹಣ್ಣ ಕುಟುಕಿ ರಸ ತಾಗದೆ ನುಂಗುತ್ತದೆ. ಅದು ಸಾರೀಕಪಕ್ಷಿ, ಹಾರಿಹೋಯಿತು. ಅದರಾಗತವನರಿ, ಆತ್ಮನಿರವಯ ನಿನ್ನ ನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.