ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿತ್ತು
ಊರೆಲ್ಲರ ಉರುಳುತ್ತದೆ.
ಆ ಉರುಳು ಕೊರಳ ಬೀರಿ ಬ್ರಹ್ಮನ ಉಸುರಡಗಿತ್ತು.
ವಿಷ್ಣುವಿನ ಎಡೆಯಾಟ ಬಿಟ್ಟಿತ್ತು,
ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತಿದೆ.
ಅದ ನಂದಿಸುವರಿಲ್ಲ, ಮೂರರ ಬಿಂದುವನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Art
Manuscript
Music
Courtesy:
Transliteration
Vāri saliladalli ondu śaradhi huṭṭittu
ūrellara uruḷuttade.
Ā uruḷu koraḷa bīri brahmana usuraḍagittu.
Viṣṇuvina eḍeyāṭa biṭṭittu,
rudrana haṇegiccu daḷḷuri bēvuttide.
Ada nandisuvarilla, mūrara binduvanari,
puṇyāraṇyadahana bhīmēśvaraliṅga niraṅgasaṅga.
ಸ್ಥಲ -
ಭಕ್ತಿಸ್ಥಲದ ನಿರ್ದೇಶಭಾವ