Index   ವಚನ - 86    Search  
 
ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ ಒಳಹೊರಗಾಗುವ ವರ್ತಕ ತ್ರಿವಿಧ ಶುದ್ಧವಾಗಿಯಿಪ್ಪ ಭಕ್ತನ ಜಂಗಮದ ಹೃತ್ಕಮಲವೆ ವಿರಕ್ತವಾಸ. ಇಷ್ಟನರಿದು ಮರೆದವಂಗಲ್ಲದೆ ತೆರಪಿಲ್ಲ; ನಿನ್ನ ನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.