ಉದಕ ನಾನಾ ವರ್ಣದಲ್ಲಿ ಬೆರಸಿ
ಅವುಗಳ ಛಾಯಕ್ಕೆ ಭಿನ್ನಭಾವವಿಲ್ಲದೆ,
ಆ ರೂಪಿಂಗೆ ದ್ರವವೊಡಲಾಗಿ ತೋರುವಂತೆ
ಎನ್ನ ಸರ್ವಾಂಗದಲ್ಲಿ ತೋರುವ ತೋರಿಕೆ ನೀನಾಗಿ,
ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು,
ಹೊರಗಳವನ ಪ್ರತಿರೂಪಿನಂತೆ
ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ.
ಹಾಗೆಂದಲ್ಲಿಯೆ ನಿನ್ನ ಉಳುಮೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.