Index   ವಚನ - 3    Search  
 
ಎನ್ನನರಿಯಿಸದಿರುವೆ, ಎನ್ನನರಿಯಿಸು ಗುರುವೆ ನಿನ್ನನರಿಯಿಸಬೇಡ. ಎನ್ನನರಿಯದವ ನಿನ್ನನರಿಯ. ಎನ್ನನರಿಯಿಸದೆ ನಿನ್ನನರಿಯಿಸಿದಡೆ, ನೀನೆನಗೆ ಗುರುವಲ್ಲ; ನಾ ನಿನಗೆ ಶಿಷ್ಯನಲ್ಲ. ಎನ್ನನರಿಯಿಸಿದಡೆ ನೀನೆನಗೆ ಗುರು; ನಾ ನಿನಗೆ ಶಿಷ್ಯ, ಮಸಣಯ್ಯಪ್ರಿಯ ಗಜೇಶ್ವರಾ.