Index   ವಚನ - 13    Search  
 
ಬಸವ ನೀಲಲೋಚನೆ ಇಬ್ಬರ ನಾಮಾಕ್ಷರ ಕೂಡಲು ಎಂಟಕ್ಷರಗಳಾದವು. ಆ ಎಂಟಕ್ಷರಗಳೇ ಮಾಯಾಖ್ಯ ಪಂಚಾಕ್ಷರವಾದವು, ಮಾಯಾಖ್ಯ ಪಂಚಾಕ್ಷರ ಎಂತೆಂದಡೆ : ಓಂ ಹ್ರಾಂ ಹ್ರೀಂ ನಮಃಶಿವಾಯ. ಸಾಕ್ಷಿ: 'ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ | ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ತ್ವನಿರ್ಣಯಂ|| ನೀಲಲೋಚನೆ ಯಸ್ತು ನಾಮಾಕ್ಷರಂ ಪಂಚಕಂ | ಸ್ತೋತ್ರಂ ವೇತ್ತಿ ತ್ರಿಸಂಧ್ಯಾಂ ಚ ಭಕ್ತಸ್ಸರ್ವಂ ಕಾಮಮೋಕ್ಷದಂ||' ಎಂದುದಾಗಿ, ಈ ಎಂಟಕ್ಷರವೇ ಎನ್ನ ಅಷ್ಟದಳಕಮಲದೊಳಗೆ ಇಷ್ಟಲಿಂಗವಾಗಿ ನಿಂದ ನಿಲವ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.