Index   ವಚನ - 17    Search  
 
ತಮಂಧಕಾರದೊಳು ಮೋಡವಿಲ್ಲದ ನಿರ್ಮಲಾಕಾಶದಂತೆ, ಎಲೆಯಿಲ್ಲದ ವೃಕ್ಷದಂತೆ, ರೆಕ್ಕೆಯಿಲ್ಲದ ಪಕ್ಷಿಯಂತೆ, ಗಾಳಿಯಿಲ್ಲದ ದೀಪದಂತೆ, ನೊರೆ ತೆರೆ ಬುದ್ಬುದಾಕಾರವಿಲ್ಲದ ಸಮುದ್ರದಂತೆ, ಇದು ಸಹಜಜ್ಞಾನವು ಎಂದು ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ