ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ'- ಎಂದು,
ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತ ಮನವ ನೋಡ!
ಆಯುಷ್ಯವೇ ಲಿಂಗ, ಶ್ರೀಯೇ ಜಂಗಮ! ನಿಧನವೆ ಸುಜ್ಞಾನ,
ವಿದ್ಯವೆ ಶಿವಮಂತ್ರ, ದೇಹವೆ ದಾಸೋಹಮ್ಮೆಂದು ಶ್ರೀಗುರು ಬರೆದನಾಗಿ!
ಹೊಟ್ಟೆಯ ಶಿಶುವಿಂಗೆ ಬೇರೆ ಬಟ್ಟಲ ಬಯಸುವರೊಳರೆ?
ಮಹಾಘನ ಸೋಮೇಶ್ವರನಲ್ಲಿ
ಅಯೋನಿಸಂಭವನಾದ ಶರಣಂಗೆ
Art
Manuscript
Music
Courtesy:
Transliteration
Āyuḥ karma ca vittaṁ ca vidyā nidhanamēva ca'- endu,
idakkan̄ji um'maḷisuva māyāprasūta manava nōḍa!
Āyuṣyavē liṅga, śrīyē jaṅgama! Nidhanave sujñāna,
vidyave śivamantra, dēhave dāsōham'mendu śrīguru baredanāgi!
Hoṭṭeya śiśuviṅge bēre baṭṭala bayasuvaroḷare?
Mahāghana sōmēśvaranalli
ayōnisambhavanāda śaraṇaṅge