ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು?
ಪಿಂಡ ಹುಟ್ಟುವಾಗ ಅದಕ್ಕೆ ಸಂಚಿತ
ಪ್ರಾರಬ್ಧ ಆಗಾಮಿ ತಪ್ಪದೆಂದೆ.
ಆರು ಸತ್ತರೂ ಲೇಸಿಗರಿಲ್ಲ;
ತಮ್ಮ ತಮ್ಮಷ್ಟಕ್ಕೆ ಲೇಸಿಗರೆಲ್ಲರು.
ಇದು ತಪ್ಪದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
Art
Manuscript
Music
Courtesy:
Transliteration
Paśu sāvutta tanna śiśuviṅge ēna gaḷisikoṭṭittu?
Piṇḍa huṭṭuvāga adakke san̄cita
prārabdha āgāmi tappadende.
Āru sattarū lēsigarilla;
tam'ma tam'maṣṭakke lēsigarellaru.
Idu tappadu, kalyāṇada tripurāntaka liṅgadalli
gāvudi mācayya hēḷiduda diṭavenniraṇṇā.