Index   ವಚನ - 19    Search  
 
ಎಮ್ಮಾಕೆಯ ಕೈಯ ಮೊಗೆಯ ನೀರಿನಲ್ಲಿ ನಾಮವ ತೇಯಲಾಗಿ ನಾಮವುಳಿದು ನೀರಳಿಯಿತ್ತು. ಅಳಿದ ನೀರ ಹಣೆಗಿಕ್ಕಲಾಗಿ ನಿರ್ನಾಮವಾಯಿತ್ತು ; ನಾರಾಯಣಪ್ರಿಯ ರಾಮನಾಥನಲ್ಲಿ ನಿಶ್ಚಯವಾಯಿತ್ತೆನಗೆ.