Index   ವಚನ - 30    Search  
 
ಕಾಯ ಕಾಯವ ನುಂಗಿ, ಮನ ಮನವ ನುಂಗಿ, ಘನ ಘನವ ನುಂಗಿ, ತನ್ಮಯ ತದ್ರೂಪಾಗಿ ನಿಂದಲ್ಲಿ, ವಿರಳವ ಅವಿರಳ ನುಂಗಿ, ಸೆರಗುದೋರದ ಕುರುಹು ಅವತಾರ ಸಾಧನ ಸಾಧ್ಯ ಗುಪ್ತನ ಭಕ್ತಿ, ಮರ್ತ್ಯದ ಮಣಿಹ ಸಂದಿತ್ತು. ವೃಷಭೇಶ್ವರ ಮಂದಿರಕ್ಕೆ ಬಂದು ಎನ್ನ ಸಂದೇಹ ಸಂಕಲ್ಪವಂ ಬಿಡಿಸಿ ಪ್ರಕಟವೆ ಕಡೆಯೆಂದು ಅಂದು ಎಂದು ಬಂದುದು ಸಂದಿತ್ತು ಅಂಗಪೂಜೆ ಲಿಂಗವೆ ಎಂಬುದಕ್ಕೆ ಮುನ್ನವೆ ಐಕ್ಯ, ಅವಸಾನ ರಾಮೇಶ್ವರಲಿಂಗದಲ್ಲಿ.