Index   ವಚನ - 53    Search  
 
ಜಲದಲ್ಲಿ ಹುಟ್ಟಿದ ಚರಾದಿಗಳೂ ಸರಿ, ಜಲವೂ ಸರಿಯೆ. ಅನಾದಿ ವಸ್ತುವಿನಲ್ಲಿ ಹುಟ್ಟಿದ ಬ್ರಹ್ಮ ಆದಿಯಾದ ಬಾಧಿಸಿಕೊಂಬ ದೈವವೂ ಸರಿಯೆ, ವಸ್ತುವೂ ಸರಿಯೆ. ಇದನಲ್ಲ ಅಹುದೆನಬಾರದು ಸಂತೆಗೆ ಬಂದವರೆಲ್ಲಕ್ಕೂ ಬೆಲ್ಲದ ವ್ಯವಹಾರವೆ? ನಾರಾಯಣಪ್ರಿಯ ರಾಮನಾಥಾ.