Index   ವಚನ - 80    Search  
 
ಮರ್ತ್ಯಲೋಕವ ಪಾವನವ ಮಾಡುವೆನೆಂದು ಸುಳಿವ ವಿರಕ್ತ ಜಂಗಮದಿರವು ಹೇಗಿರಬೇಕೆಂದಡೆ ಕಲ್ಲಿನ ಮೇಲೆ ಹೊಯ್ದ ನೀರಿನಂತಿರಬೇಕು. ಪಥವಿಲ್ಲದ ಪಯಣವ ಹೋಗಿ ಗತಿಗೆಟ್ಟವನಂತಿರಬೇಕು. ಶ್ರುತಿಯಡಗಿದ ನಾದದ ಪರಿಯಂತಿರಬೇಕು. ಹುರಿದ ಬೀಜದ ಒಳಗಿನಂತಿರಬೇಕು. ಅದಾವಂಗೂ ಅಸಾಧ್ಯ ನೋಡಾ, ನಾರಾಯಣಪ್ರಿಯ ರಾಮನಾಥಾ.