ಮರುಳನ ಊಟದಂತೆ, ಮಯೂರನ ನಿದ್ರೆಯಂತೆ,
ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ,
ಕಟಕದಲ್ಲಿ ತೋರುವ ಆಸಿಯ ರಸೆಯಂತೆ,
ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ,
ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ,
ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು
ನಮೋ ನಮೋ ಎಂಬೆ
ನಾರಾಯಣಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Maruḷana ūṭadante, mayūrana nidreyante,
mārtāṇḍana kiraṇadante, sphaṭikada ghaṭadante,
kaṭakadalli tōruva āsiya raseyante,
hoddiyū hoddadante, iddū illadante,
kaṇḍū kāṇadante, kēḷiyū kēḷadante,
ippa suḷiva jaṅgamamūrtiya kaṇḍu
namō namō embe
nārāyaṇapriya rāmanāt