Index   ವಚನ - 91    Search  
 
ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ ಅದೃಶ್ಯಾಕರಣ ಪರಕಾಯಪ್ರವೇಶ ತೀರ್ಥಯಾತ್ರೆ ದಿಗ್ವಳಯದಲ್ಲಿ ಜನಜನಿತದ ಆಗುಚೇಗೆಯಲ್ಲದೆ ಎಲ್ಲಿಯೂ ಕಾಬುದಿಲ್ಲ. ಕಾಬುದಕ್ಕೆ ತೆರಪು ಮೂರನರಿದು ಮೂರ ಮರೆದು ಆರನರಿದು ಹದಿನಾರ ಹರಿದು, ಐದ ಬಿಟ್ಟು ಇಪ್ಪತ್ತೈದ ಕಟ್ಟಿ ಬಟ್ಟ ಬಯಲು ತುಟ್ಟತುದಿಯ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥನಲ್ಲಿ ಕೂಟದ ಶರಣ.