Index   ವಚನ - 95    Search  
 
ಸರ್ವಜ್ಞಾನ ಸಂಬಂಧಿಯ ಇರವು: ಕಿರಣದೊಳಗಣ ಸುರಂಗದಂತೆ ಸುರಭಿಯೊಳಗಣ ನವನೀತದಂತೆ ಬೀಜದೊಳಗಣ ವೃಕ್ಷದಂತೆ ಸಾಧಕರಲ್ಲಿ ತೋರುವ ಸಂಕಲ್ಪದಂತೆ ಸಾತ್ವಿಕರಲ್ಲಿ ತೋರುವ ವಿಲಾಸಿತದಂತೆ ಅಗ್ನಿಯಲ್ಲಿ ಹೊರಹೊಮ್ಮದ ತೆರವು ಕೆಡದೆ ಉಡುಗಿ ತೋರುವ ಬೆಳಗಿನಂತೆ ತೆರಹಿಲ್ಲದ ಭಾವ ವೇದಕ್ಕೆ ಅತೀತ, ಶಾಸ್ತ್ರಕ್ಕೆ ಅಗಮ್ಯ, ಪುರಾಣಕ್ಕೆ ಆಗೋಚರ, ಪುಣ್ಯದ ಪಟಲ ದಗ್ಧ, ನಾಮ ನಾಶ, ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯವಾದ ಶರಣ.