Index   ವಚನ - 97    Search  
 
ಸ್ಥೂಲ ತನುವನರಿದು ಮರೆದಲ್ಲಿ ಗುರುವನರಿದವ. ಸೂಕ್ಷ್ಮ ತನುವನರಿದು ಮರೆದಲ್ಲಿ ಲಿಂಗವನರಿದವ. ಕಾರಣ ತನುವನರಿದು ಮರೆದಲ್ಲಿ ಜಂಗಮವನರಿದವ. ಇಂತೀ ತ್ರಿವಿಧವನರಿದು ನಿಶ್ಚಯವಾದ ನಿಶ್ಚಟಂಗೆ ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ. ವಾಯುವಿನ ಕೈಯ ಗಂಧದಂತ ನಾರಾಯಣಪ್ರಿಯ ರಾಮನಾಥನಲ್ಲಿ ಭಾವ ನಿರ್ಭಾವನಾದವಂಗೆ.