Index   ವಚನ - 6    Search  
 
ಗುರುವೆ ಸುಜ್ಞಾನಮೂರ್ತಿಯಯ್ಯ. ಗುರುವೆ ಮಹಾಜ್ಞಾನಮೂರ್ತಿಯಯ್ಯ. ಗುರುವೆ ಪರಿಪೂರ್ಣಜ್ಞಾನಮೂರ್ತಿಯಯ್ಯ. ಗುರುವೆ ಅಂತರಂಗಪರಿಪೂರ್ಣನಯ್ಯ. ಗುರುವೆ ಬಹಿರಂಗಪರಿಪೂರ್ಣನಯ್ಯ. ಗುರುವೆ ಮಾಯಾರಹಿತನಯ್ಯ. ಗುರುವೆ ನಿತ್ಯತೃಪ್ತನಯ್ಯ. ಗುರುವೆ ಆದಿಮಧ್ಯಾಂತರಹಿತನಯ್ಯ. ಗುರುವೆ ಭವರೋಗವೈದ್ಯನಯ್ಯ. ಗುರುವೆ ಸಕಲಶಾಸ್ತ್ರಾತೀತನಯ್ಯ. ಗುರುವೆ ನಿಜಾನಂದಮೂರ್ತಿಯಯ್ಯ. ಗುರುವೆ ಪರತರಪರಬ್ರಹ್ಮವಯ್ಯ. ಗುರುಭಕ್ತಿಯಿಂದ ಮಿಗಿಲು ಸುಖವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಮೋಕ್ಷವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ನಿಜವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಐಶ್ವರ್ಯವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಪರಿಣಾಮವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಕೈವಲ್ಯವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಧರ್ಮವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಪುಣ್ಯವಿಲ್ಲವಯ್ಯ. ಗುರುಭಕ್ತಿಯಿಂದ ಗುರುಭಕ್ತಯ್ಯ ಮೊದಲಾದವರು ನಿಜನೈಷ್ಠೆಯಿಂದ ಸಮರಸೈಕ್ಯರಾದರಯ್ಯ. ಗುರುವಿನಿಂದಧಿಕ ಪರವಿಲ್ಲ ನೋಡ! ಸಮಸ್ತ ಪದಕ್ಕೆ ಶ್ರೀಗುರುವೆ ಕಾರಣ ನೋಡ, ಸಂಗನಬಸವೇಶ್ವರ