Index   ವಚನ - 28    Search  
 
ಹರಹರ ಶಿವಶಿವ ಜಯಜಯ ಕರುಣಾಕರ 'ಮತ್ಪ್ರಾಣನಾಥ ಮಹಾಪ್ರಭು ಚಿದ್ಘನ ಶ್ರೀಗುರುಲಿಂಗಜಂಗಮವೆ, ನಿಮ್ಮ ಶರಣಗಣಂಗಳೆಲ್ಲ ನಿರವಯಸಮಾಧಿಯಲ್ಲಿ ಹೋದ ಮಾರ್ಗವ ನಿಮ್ಮ ಕರುಣಕಟಾಕ್ಷೆಯಿಂದ ದಯವಿಟ್ಟು ರಕ್ಷಿಸಯ್ಯ ತಂದೆ, ಕೇಳಯ್ಯ ವರಕುಮಾರದೇಶಿಕೇಂದ್ರನೆ ಶಿವಗಣಂಗಳೆಲ್ಲ ಪರಶಿವಲಿಂಗಕ್ಕು ತಮಗು ಭಿನ್ನವಿಲ್ಲದೆ ಅಭಿನ್ನಸ್ವರೂಪದಿಂದ ಎರಡಳಿದು ಏಕರಸವಾಗಿ ಪುಷ್ಪ ಪರಿಮಳದಂತೆ, ಬಾವನ್ನಕೋಶ ಬಂಗಾರದ ತೆರದಿ, ಪಂಚಾಗ್ನಿಗಳ ಮೂಲ ಚಿತ್ಸ್ವರೂಪವಾದ ಚಿದಗ್ನಿಯಲ್ಲಿ ಸಮರಸವ ಮಾಡಿ, ಸರ್ವಾಚಾರಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯೆ ದ್ವಿತೀಯ ಕೈಲಾಸವೆಂದು, ಸತ್ಯ ನಡೆನುಡಿಯೆ ನಿಜಶಿವಮಂದಿರವೆಂದು, ತನ್ನ ದೀಕ್ಷಾಕರ್ತುವಾದ ಗುರು ಮೊದಲಾಗಿ ಸಮಸ್ತರೆಲ್ಲ ಶಿವಪಥಕ್ಕೆ ಯೋಗ್ಯವಾಗಿ ಬಂದಡೆ ಒಡಗೂಡಿ ಕೊಂಡು, ಶಿವಪಥಕ್ಕೆ ಅಯೋಗ್ಯವಾದಡೆ ತ್ಯಜಿಸಿ, ಪರಿಪೂರ್ಣ ಪರಂಜ್ಯೋತಿ ಸ್ತಂಭಾಕಾರವೆಂಬ ನಿಷ್ಕಲ ಪರಶಿವಬಿಂದುಸ್ವರೂಪವಾದ ಷೋಡಶವರ್ಣದ ಚಿದ್ಬೆಳಗಿನೊಳಗೆ ಉರಿ-ಕರ್ಪೂರಂದತೆ ನಿಜಶಿವಸಮಾಧಿಯಲ್ಲಿ ಬೆರೆದು ಹೋದರು ನೋಡ. ಇಂತೀ ಪ್ರಕಾರದಿಂದ ರಾಜಹಂಸನೋಪಾಯದಿಯಲ್ಲಿ ಒಳಗು ಹೊರಗು ಅನಾಚಾರವ ತ್ಯಜಿಸಿ, ಶಿವಾಚಾರಸಮರತಿಯಿಂದ ಕೂಡಿದರು ನೋಡ. ಆಚಾರವೆಪ್ರಾಣವಾಗಿ ಸಕಲಪ್ರಮಥಗಣವೆಲ್ಲ ಚಿದ್ಘನಮಹಾಲಿಂಗದಲ್ಲಿ ಕೂಟಸ್ಥರಾದರು ನೋಡ ಸಂಗನಬಸವೇಶ್ವರ