ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು
ರೇವಣಸಿದ್ಧೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ
ನೂರೊಂದು ವಿರಕ್ತರು ಮೊದಲಾದ
ಮರ್ತ್ಯಲೋಕದ ಮಹಾಗಣಂಗಳೆಲ್ಲ
ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ
ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು
ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ
ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ
ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ
ಮುಳುಗಿ ಹೋದ
ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-
ಆಭರಣ-ವಾಹನವೆಂಬ
ಮಾಯಾಪಾಶ ಕಡವರವ ದಾಂಟಿದರು ನೋಡ.
ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ
ಸಂಗನಬಸವೇಶ್ವರ
Art
Manuscript
Music
Courtesy:
Transliteration
Hīṅge pūrvapurātanaru sadguru vacanōktiyinda tiḷidu
rēvaṇasid'dhēśvara, maruḷasid'dhēśvara, tōṇṭadasid'dhēśvara
nūrondu viraktaru modalāda
martyalōkada mahāgaṇaṅgaḷella
sarvācāra satkāyaka satkriyā samyajñāna
sadbhaktiya sadgurumukhadinda besagoṇḍu
nijaprasādavendu sadbhāvadinda bhāvisi
naḍedante nuḍidu, nuḍidante naḍedu, harukillade
hari aja sura manu muni dēva dānava mānavarella
muḷugi hōda
Honnu-heṇṇu-maṇṇu-anna-nīru-vastra-
ābharaṇa-vāhanavemba
māyāpāśa kaḍavarava dāṇṭidaru nōḍa.
Māyābhōgavirahitarāgi liṅgabhōgasampannarādaru nōḍa
saṅganabasavēśvara