ಆಚಾರ-ಅರುಹಿನಲ್ಲಿ ಸತ್ಕ್ರಿಯಾಸುಜ್ಞಾನ ಗುರುವ
ಸಂಬಂಧವ ಮಾಡಿಕೊಂಡು,
ಪಾಣಿ-ಪ್ರಾಣದಲ್ಲಿ ಸತ್ಕ್ರಿಯಾಸುಜ್ಞಾನಲಿಂಗವ
ಸಂಬಂಧವ ಮಾಡಿಕೊಂಡು,
ಆಚರಣೆ-ಸಂಬಂಧಂಗಳಲ್ಲಿ ಸತ್ಕ್ರಿಯಾ ಸುಜ್ಞಾನಜಂಗಮವ
ಸಂಬಂಧವ ಮಾಡಿಕೊಂಡು,
ನಡೆ-ನುಡಿಗಳಲ್ಲಿ ಸತ್ಕ್ರಿಯಾ ಸುಜ್ಞಾನ ಪಾದೋದಕವ
ಸಂಬಂಧವ ಮಾಡಿಕೊಂಡು,
ಜಿಹ್ವೆ-ನಾಸಿಕಂಗಳಲ್ಲಿ ಸತ್ಕ್ರಿಯಾ ಸುಜ್ಞಾನ ಪ್ರಸಾದವ
ಸಂಬಂಧವ ಮಾಡಿಕೊಂಡು,
ಸರ್ವಾಂಗ-ಸುಮನದಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ವಿಭೂತಿಯ
ಸಂಬಂಧವ ಮಾಡಿಕೊಂಡು,
ತತ್ಸ್ಥಾನ-ಚಿದೃಕ್ಕಿನಲ್ಲಿ ಸತ್ಕ್ರಿಯಾ ಸುಜ್ಞಾನ ಚಿದ್ರುದ್ರಾಕ್ಷಿಯ
ಸಂಬಂಧವ ಮಾಡಿಕೊಂಡು,
ಕ್ರಿಯಾಕಾಶ-ಜ್ಞಾನಾಕಾಶಂಗಳಲ್ಲಿ ಸತ್ಕ್ರಿಯಾ ಸುಜ್ಞಾನ ಚಿನ್ಮಂತ್ರವ
ಸಂಬಂಧವ ಮಾಡಿಕೊಂಡರು ನೋಡ-
ಸೂಕ್ಷ್ಮ ಕಂಥೆಯ ಧರಿಸಿ, ಸಚ್ಚಿದಾನಂದ ಲೀಲಾಮೂರ್ತಿಗಳಾಗಿ
ಇಂತು ಉಭಯ ವಿಚಾರವಿಡಿದು ಆಚರಿಸುವರೆ
ಆದಿಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ācāra-aruhinalli satkriyāsujñāna guruva
sambandhava māḍikoṇḍu,
pāṇi-prāṇadalli satkriyāsujñānaliṅgava
sambandhava māḍikoṇḍu,
ācaraṇe-sambandhaṅgaḷalli satkriyā sujñānajaṅgamava
sambandhava māḍikoṇḍu,
naḍe-nuḍigaḷalli satkriyā sujñāna pādōdakava
sambandhava māḍikoṇḍu,
jihve-nāsikaṅgaḷalli satkriyā sujñāna prasādava
sambandhava māḍikoṇḍu,
sarvāṅga-sumanadalli satkriyāsujñāna cidvibhūtiya
sambandhava māḍikoṇḍu,
Tatsthāna-cidr̥kkinalli satkriyā sujñāna cidrudrākṣiya
sambandhava māḍikoṇḍu,
kriyākāśa-jñānākāśaṅgaḷalli satkriyā sujñāna cinmantrava
sambandhava māḍikoṇḍaru nōḍa-
sūkṣma kantheya dharisi, saccidānanda līlāmūrtigaḷāgi
intu ubhaya vicāraviḍidu ācarisuvare
ādisadbhakta śivaśaraṇagaṇaṅgaḷu nōḍa
saṅganabasavēśvara.