Index   ವಚನ - 31    Search  
 
ತನುತ್ರಯಂಗಳಲ್ಲಿ ಕ್ರಿಯಾಗುರು-ಜ್ಞಾನಗುರು-ಮಹಾಜ್ಞಾನಗುರುವ ಸಂಬಂಧವ ಮಾಡಿಕೊಂಡು, ಮನತ್ರಯಂಗಳಲ್ಲಿ ಕ್ರಿಯಾಲಿಂಗ-ಜ್ಞಾನಲಿಂಗ-ಮಹಾಜ್ಞಾನಲಿಂಗವ ಸಂಬಂಧವ ಮಾಡಿಕೊಂಡು, ಭಾವತ್ರಯಂಗಳಲ್ಲಿ ಕ್ರಿಯಾಜಂಗಮ-ಜ್ಞಾನಜಂಗಮ-ಮಹಾಜ್ಞಾನಜಂಗಮವ ಸಂಬಂಧವ ಮಾಡಿಕೊಂಡು ಆತ್ಮತ್ರಯಂಗಳಲ್ಲಿ ಕ್ರಿಯಾಪಾದೋದಕ-ಜ್ಞಾನಪಾದೋದಕ-ಮಹಾಜ್ಞಾನಪಾದೋದಕವ ಸಂಬಂಧವ ಮಾಡಿಕೊಂಡು, ಅವಸ್ಥಾತ್ರಯಂಗಳಲ್ಲಿ ಕ್ರಿಯಾಪ್ರಸಾದ-ಜ್ಞಾನಪ್ರಸಾದ-ಮಹಾಜ್ಞಾನಪ್ರಸಾದವ ಸಂಬಂಧವ ಮಾಡಿಕೊಂಡು, ಕರಣತ್ರಯಂಗಳಲ್ಲಿ ಕ್ರಿಯಾಭಸಿತ-ಜ್ಞಾನಭಸಿತ-ಮಹಾಜ್ಞಾನಭಸಿತವ ಸಂಬಂಧವ ಮಾಡಿಕೊಂಡು, ಜೀವತ್ರಯಂಗಳಲ್ಲಿ ಕ್ರಿಯಾರುದ್ರಾಕ್ಷಿ-ಜ್ಞಾನರುದ್ರಾಕ್ಷಿ-ಮಹಾಜ್ಞಾನರುದ್ರಾಕ್ಷಿಗಳ ಸಂಬಂಧವ ಮಾಡಿಕೊಂಡು, ಗುಣತ್ರಯಂಗಳಲ್ಲಿ ಕ್ರಿಯಾಮಂತ್ರ-ಜ್ಞಾನಮಂತ್ರ-ಮಹಾಜ್ಞಾನಮಂತ್ರವ ಸಂಬಂಧವ ಮಾಡಿಕೊಂಡರು ನೋಡ. ಕಾರಣ ಕಂಥೆಯ ಧರಿಸಿ ತ್ರಿವಿಧವಿಚಾರವಿಡಿದು ಆಚರಿಸುವರೆ ಅನಾದಿಸದ್ಭಕ್ತ ಶಿವಶರಣಗಣಂಗಳು ನೋಡ ಸಂಗನಬಸವೇಶ್ವರ.