Index   ವಚನ - 6    Search  
 
ಓಡು ಗುಂಡುಗಳಿಗೆ ರೂಢೀಶ ಶಿವನೆಂದು ಓಡಾಡುವ ನರಗುರಿಗಳು ನೀವು ಕೇಳಿರೊ. ಕಾಡ ಹೊಗದಿರಿ ನೀವು, ಮೃಡನಿದ್ದ ನೆಲೆಯನರಿಯದೆ. ಬಟ್ಟೆ ತಪ್ಪಿ ಕಾನನದೊಳು ಬಿದ್ದು, ನಾನು ನೀನೆಂಬ ವ್ಯಾಘ್ರನಡ್ಡಗಟ್ಟಿತ್ತಯ್ಯ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಸಿಂಹ ಘರ್ಜಿಸಿತ್ತಯ್ಯ. ರೂಪು ರುಚಿ ಸ್ಪರ್ಶ ಶಬ್ದ ಗಂಧ ಈ ಐದು ಮೊರೆದೆದ್ದವಯ್ಯ. ಕಾಲ ಕರ್ಮ ಗುಣದೋಷವೆಂಬ ಮಾರಿ ಬಾಯಿದೆರದು ನುಂಗಿತಯ್ಯ. ಇಡಾ ಪಿಂಗಳ ಸುಷುಮ್ನನೆಂಬ ಪಿಶಾಚಿಯು ಮದವ ಮಾಡುವದ ಕಂಡೆನಯ್ಯ. ಇಂತರಿತು ಪಾಪಿಯ ಮಗನೆಂದು ಕರವಿಡಿದು, ಗುರುವಿನ ವಾಕ್ಯವ ಕೇಳದೆ, ಪತಿವ್ರತತನದಲ್ಲಿದ್ದ ಸತಿ ಜಾರತನಮಾಡಿರ್ದುದ ಕಂಡು, ಪುರುಷನು ಮೂಗನರಿದಂತೆ ಆಯಿತ್ತು ಕಾಣಾ, ಗೊಹೇಶ್ವರಪ್ರಿಯ ನಿರಾಳಲಿಂಗಾ.