Index   ವಚನ - 15    Search  
 
ಬ್ರಹ್ಮ ಗುರು, ವಿಷ್ಣು ಲಿಂಗ, ರುದ್ರ ಜಂಗಮವೆಂಬ ವ್ರತಗೇಡಿಗಳು ನೀವು ಕೇಳಿರೊ. ಬ್ರಹ್ಮನ ಶಿರ ಹೋಯಿತ್ತು. ವಿಷ್ಣುವಿಗೆ ಹತ್ತು ಪ್ರಳಯವಾಯಿತ್ತು. ರುದ್ರನು ಧ್ಯಾನಾರೂಢನಾದ. ಆ ರುದ್ರಂಗೆ ಪರತ್ರಯ, ಈಶ್ವರಂಗೆ ಪರತ್ರಯ, ಸದಾಶಿವಂಗೆ ಪರತ್ರಯ, ಪರಶಿವಂಗೆ ಪರತ್ರಯ, ಇಂತಿವರು ಆರುಮಂದಿ ಕೂಡಿ ಗುರುವಿನ ಧ್ಯಾನದಲ್ಲಿ ಪರವಶವಾಗಿ, ಆ ಶ್ರೀಗುರುವಿದ್ದ ನೆಲೆ ಎಂತೆಂದಡೆ : ಸಪ್ತಸ್ಥಾನ ಸಹಸ್ರದಳಕಮಲದ ಜ್ಯೋತಿವರ್ಣದ ಗುರು. ಆ ಗುರುವಿಂಗೆ ಪರತ್ರಯಲಿಂಗ, ಆ ಲಿಂಗಕ್ಕೆ ಪರತ್ರಯಜಂಗಮ. ಇಂತೀ [ಅ]ನೂನಸ್ಥಳದಲ್ಲಿದ್ದ ಜಂಗಮನ ಮಣಿಪೂರಕದಲ್ಲಿದ್ದ ರುದ್ರಂಗೆ ಸರಿಯೆಂಬ ಜಂಗಮದ್ರೋಹಿಗಳ ಮಾತ ಕೇಳಲಾಗದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.