Index   ವಚನ - 27    Search  
 
ಅಕ್ಷರದ ಆದಿಮೂಲವನರಿಯಬಲ್ಲರೆ ಪ್ರಾಣಲಿಂಗದ ಅಕ್ಷರದ ಹುಟ್ಟಾವಳಿಯು ಸ್ಥೂಲದಲ್ಲಿಹುದು. ಅಕ್ಷರದ ನಿಲವು ಸೂಕ್ಷ್ಮದಲ್ಲಿಹುದು. ಮಾತಿಗೆ ಮೊದಲು ಶಬ್ದಮುಗ್ಧವಾಗಿರಲು ಕಾರಣದಲ್ಲಿಹುದು. ಇಂತೀ ತ್ರಿವಿಧಪರಿಯ ಭೇದಾಭೇದಂಗಳ ಸಂಬಂಧಿಸಿಕೊಂಡು ಪ್ರಾಣಲಿಂಗಸಾಹಿತ್ಯವಾದ ಕಾರಣ ಭಕ್ತರ ಶ್ರೀಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗಾ.