Index   ವಚನ - 28    Search  
 
ಇನ್ನು ಭಕ್ತಸ್ಥಲದ ವಚನ : ಪೃಥ್ವಿಯ ಮೂಲವನಳಿದು ಅಪ್ಪುವಿನೊಳು ಕೂಡಬಲ್ಲರೆ ಭಕ್ತ. ಅಪ್ಪುವಿನ ಭಯವ ನಿಲ್ಲಿಸಿ ಅಗ್ನಿಯ ಕೂಡಬಲ್ಲರೆ ಮಾಹೇಶ್ವರ. ಅಗ್ನಿಯ ಆರ್ಭಟವನಳಿದು ವಾಯುವ ಕೂಡಬಲ್ಲರೆ ಪ್ರಸಾದಿ. ವಾಯುವಿನ ಚಂಚಲವ ನಿಲ್ಲಿಸಿ ಆಕಾಶವ ಕೂಡಬಲ್ಲರೆ ಪ್ರಾಣಲಿಂಗಿ, ಆಕಾಶದ ಅಂಕವನಳಿದು ನಿರಂಕಸ್ಥಳದಲ್ಲಿ ಕೂಡಬಲ್ಲರೆ ಶರಣ. ಆಕಾಶದಹಂಕೃತಿಯನಳಿದು ನಿತ್ಯಸ್ಥೂಲವ ಕೂಡಬಲ್ಲರೆ ಐಕ್ಯ. ಇಂತೀ ಆರು ಆರುಪರಿಯ ಬಣ್ಣದ ಪರತತ್ವದೊಳು ಕೂಡಿ ಸಂಬಂಧವಾದ ನಿಜಸಾಹಿತ್ಯವುಳ್ಳ ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗಾ.