ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು
ನುಡಿವ ಅಣ್ಣಗಳು ನೀವು ಕೇಳಿರೊ.
ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು
ಆ ನಾಲ್ಕು ಪವನ ಒಂದುಗೂಡಿ
ಪೃಥ್ವಿಯ ಗುಣವನರಿಯಬಲ್ಲರೆ
ಭಕ್ತಯೆಂದೆನಿಸಬಹುದು.
ಎಂಟೆಸಳ ಕಮಲದಲ್ಲಿ ಮೆಟ್ಟಿ ಆಡುವ
ಹಂಸನ ಸ್ಥಳವನರಿಯದೆ
ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ
ಜ್ಞಾನಿಯೆಂದೆನಿಸಬಹುದು.
ಮಾರ್ಗ ಇಲ್ಲದೆ ಹಾದಿಯ ನಡದು
ಇಪ್ಪತ್ತೊಂದುಮಣಿಯ ಯಜ್ಜವಮಾಡಿ ಪೋಣಿಸಿ
ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ
ತ್ರಿವಿಧಮಣಿಯ ಮೇರುವೆಯಂ ಕಟ್ಟಿ
ಜಪವ ಮಾಡಬಲ್ಲರೆ, ಜಪವು ಬಲಿದು
ಸ್ಥೂಲಕರ್ಮವೆಂಬ ಜಾಡ್ಯವನಳಿದುದು
ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ
ಕುಲಮದ, ಧನಮದ, ವಿದ್ಯಾಮದ,
ಪ್ರಾಯಮದವೆಂಬ ಮದಂಗಳೊಳು ಮುಳುಗಿ
ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ
ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ
ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
Art
Manuscript
Music
Courtesy:
Transliteration
Bhakti jñāna vairāgyavendu hesariṭṭu
nuḍiva aṇṇagaḷu nīvu kēḷiro.
Pavanada utpatyadallidda mūlavanaridu
ā nālku pavana ondugūḍi
pr̥thviya guṇavanariyaballare
bhaktayendenisabahudu.
Eṇṭesaḷa kamaladalli meṭṭi āḍuva
hansana sthaḷavanariyade
paṭṭagaṭṭidarasana sandaruśanava māḍaballare
jñāniyendenisabahudu.
Mārga illade hādiya naḍadu
ippattondumaṇiya yajjavamāḍi pōṇisi
sumārgadalli berasyāḍutirda
Trividhamaṇiya mēruveyaṁ kaṭṭi
japava māḍaballare, japavu balidu
sthūlakarmavemba jāḍyavanaḷidudu
vairāgyavallade, intī bhēdaṅgaḷanariyade
kulamada, dhanamada, vidyāmada,
prāyamadavemba madaṅgaḷoḷu muḷugi
krōdha, indriya kapaṭa, vyasanadalli
vairāgyavendenisuva drōhigaḷige nōḍi
nagutirda nam'ma gohēśvarapriya nirāḷaliṅga.