ಗುಹೇಶ್ವರ ಎಂಬ ಅಕ್ಷರದ ಭೇದವು:
ವರ ಕಂಬವೆ ಕಾಲು, ತೊಡಿಯೇ ಬೋದಿಗೆ,
ಸಾರಣ ಚರ್ಮ, ಕರಯೆರಡು ಮದನಧ್ವಜಯೆರಡು,
ಸ್ತುತಿಬಾಯಿ ಬಾಗಿಲು,
ಎರಡು ಶ್ರೋತ್ರವೇ ಬೆಳಕಂಡಿಯು,
ಮೂಗೇ ಜಾಳಿಂದ್ರ, ಆಲಿಗಳೆ ಸೋಪಾನ,
ಶಿರವೇ ಕಲಶ, ಭಸಿತವೆ ಪತಾಕೆ |
ಇಂತೀ ಪಂಚಗುಹೇಶ್ವರನೆಂಬ ದೇಗುಲ.
ಇನ್ನು ಅದಕ್ಕೆ ಸ್ವರವಾವುದೆಂದಡೆ:
ಗುಹೇಶ್ವರನೆ ಸ್ವರ,
ಆ ದೇಗುಲಕ್ಕೆ ಲಿಂಗವೇ ಪೀಠ.
ಪಂಚವಿಷಯವೆಂಬ ಪೂಜೆ,
ಜ್ಞಾನವೆಂಬುದ ಹಿಡಿದು ಅಜ್ಞಾನವ ದೂಡಿ,
ತಾನೆ ತನ್ನೊಳು ತಿಳಿದುದೆ ಭಂಡಾರ.
ಅದಕ್ಕೆ ಮನವೆ ಕಿವಿ,
ನಿರ್ಮನವೆಂಬ ಕದವ ತೆರೆದು
ಸುಖವೆಂಬುದೆ ನೈವೇದ್ಯ,
ಜಿಹ್ವೆಯೇ ಪೂಜಾರಿ,
ನಿತ್ಯವೇ ಪ್ರಸಾದ, ಮನದಿಚ್ಛೆಗೆ ಪೊಸಪಂಚಾಕ್ಷರಿಯ ಗಸಣೆ,
ಷಡಾಕ್ಷರವೆ ಶ್ರೀಗಂಧ, ಜ್ವಾಲೆಯೇ ಧೂಪ, ಸ್ಥಳವೇ ಹರಿವಾಣ,
ಬೋನವು ತಾನೆ, ಪೂಜಿಸುವಾತನು ತಾನೆ,
ಪೂಜೆಗೊಂಬಾತನು ತಾನೆ.
ಇಂತೀ ಪರಮಾನಂದವೆಂಬ ಸಂಗಗಳ ಕೂಡಲಂದೆ
ಚಿತ್ಸೂರ್ಯರ ಕೋಟಿಪ್ರಕಾಶವಾಗಿ ತೋರುತ್ತಿಹ
ಗೊಹೇಶ್ವರಪ್ರಿಯ ನಿರಾಳಲಿಂಗ.
Art
Manuscript
Music
Courtesy:
Transliteration
Guhēśvara emba akṣarada bhēdavu:
Vara kambave kālu, toḍiyē bōdige,
sāraṇa carma, karayeraḍu madanadhvajayeraḍu,
stutibāyi bāgilu,
eraḍu śrōtravē beḷakaṇḍiyu,
mūgē jāḷindra, āligaḷe sōpāna,
śiravē kalaśa, bhasitave patāke |
intī pan̄caguhēśvaranemba dēgula.
Innu adakke svaravāvudendaḍe:
Guhēśvarane svara,
ā dēgulakke liṅgavē pīṭha.
Pan̄caviṣayavemba pūje,
jñānavembuda hiḍidu ajñānava dūḍi,
tāne tannoḷu tiḷidude bhaṇḍāra.
Adakke manave kivi,
Nirmanavemba kadava teredu
sukhavembude naivēdya,
jihveyē pūjāri,
nityavē prasāda, manadicchege posapan̄cākṣariya gasaṇe,
ṣaḍākṣarave śrīgandha, jvāleyē dhūpa, sthaḷavē harivāṇa,
bōnavu tāne, pūjisuvātanu tāne,
pūjegombātanu tāne.
Intī paramānandavemba saṅgagaḷa kūḍalande
citsūryara kōṭiprakāśavāgi tōruttiha
gohēśvarapriya nirāḷaliṅga.