Index   ವಚನ - 2    Search  
 
ಕುರುಹಿನ ಸಾಕಾರವಿಡಿದಾಡುವರೆಲ್ಲರೂ ಕಾಲಕಂಧರನ ಹಂಗಿನಲ್ಲಿಪ್ಪರು. ಅರಿವಿನ ಆಕಾರದಲ್ಲಿ ಅರಿವೆನೆಂಬವರೆಲ್ಲರೂ ನೀಲಮೇಘನ ಹಂಗಿನ ಕೋಲದಲ್ಲಿಪ್ಪರು. ಇವೆಲ್ಲವನರಿದು ಕಂಡಿಹೆನೆಂಬವರೆಲ್ಲರೂ ಇಲ್ಲವೆಯ ಆಜ್ಞೆಗೊಳಗಾಗಿಪ್ಪರು. ಕಾಲಕಂಧರನ ಕಾಲಮುರಿದು, ನೀಲಮೇಘನೆಂಬವನ ಕೈಯ ಕೊಯ್ದು, ಎಲ್ಲರಿಗೆ ಮಾರಾಂತೆನು ಇನ್ನು ನಿಲ್ಲಿ ಸಾಕು. ಎನ್ನ ಗೋಣಿಯಮರೆಯಲ್ಲಿ ಇಪ್ಪರೆಲ್ಲರೂ ಎನ್ನ ಗೋವರಾದುದ ನೀ ಮರೆದೆಯಾ ಕೇಟೇಶ್ವರಲಿಂಗವೆ!