Index   ವಚನ - 6    Search  
 
ಶರಣ ಸಂಜೆ ಮುಂಜಾವದ ಕತ್ತಲೆಯನಳಿದನಾಗಿ ಕಾಲೋಚಿತವನರಿದು ಕೊಂಬ. ಗೋಣಿಯ ತೆರೆಯ ಹರಿದು ವಂಕ ಮೂರ ಹರಿದು ದಾಂಟಿ, ಜಾತಿ-ವಿಜಾತಿಯನರಿದು, ಕರಣೇಂದ್ರಿಯಂಗಳಲ್ಲಾಳದೆ, ತೆರಣಿಯ ಕರಣವನರಿತು ಗೂಡನಿಕ್ಕಿರೆ, ಧಾರೆ ಸುರಿವುದು ಕಂಡು ವೀರಧಾರುಣಿಯ ಮೇಲೆ ಎರೆದುದ ನಿಲಯ ಬೆಂಬಳಿಯನರಿತು ಮುಸುಕಿಕ್ಕಿಕೊಂಡು ಭಿಕ್ಷಕ್ಕೆ ಹೋಗಿ [ಕೇಳಲು] ಚಾಟಿ ಹರಿಯಿತ್ತು ಕೇಟೇಶ್ವರಲಿಂಗದಲ್ಲಿ.