ಸಂಗಕ್ಕೆ ಶರಣರ ಸಂಗವೇ ಲೇಸಯ್ಯ,
ಜಂಗಮದರಿವು ಲಿಂಗದ ನಿಲವ ತೋರುವುದಾಗಿ,
ಲಿಂಗದ ನಿಲವಾವುದೆಂದಡೆ:
ನೂರ ನಿಲಿಸಿ, ಆರ ಮೀರಿ, ಹದಿನೆಂಟ ಕಳೆದು,
ಏಳನುಳಿದು, ಒಂಬತ್ತು ಮೀರಿ,
ನಿಜಜಂಗಮದ ನಿಜಲಿಂಗದ ನಿಜಶರಣರ ಅರಿವು.
ಈ ತ್ರಿವಿಧದ ನಿರುಗೆ ಎಂತೆಂದಡೆ:
ತತ್ತ್ವಜ್ಞಾನದ ನುಡಿಯಲ್ಲಿ ಹೊಗದು.
ಅದೆಂತೆಂದಡೆ: ನಿಮ್ಮ ಭಿಕ್ಷದ ಭಿತ್ತಿಯ ಹೇಳುವೆ.
ಭಿಕ್ಷೆ ಮೂರು ವಿಧವಾಗಿಪ್ಪುದು.
ಭಿಕ್ಷೆ ಏಳುವಿಧವಾಗಿಪ್ಪುದು.
ಭಿಕ್ಷೆ ಹನ್ನರಡುವಿಧವಾಗಿಪ್ಪುದು.
ಭಿಕ್ಷದ ನಿರುಗೆಯ ಬಲ್ಲ ನಿಜವೀರದೇವಯ್ಯ.
ಆತನ ಅರಿವನುಂಟುಮಾಡಿಕೊಂಡು
ಆಚರಿಸುವ ಚರಜಂಗಮದ ಅರಿವಿನ
ತೃಪ್ತಿಯಾವುದೆಂದಡೆ:
ಕ್ಷಾರವ ಕಂಡು ವಿಭ್ರಮಣನಂತಿರಬೇಕು
ಇದು ಕ್ರೀಗಾಗದೆಂದು ಕಂಗೆಡಲೇಕೆ?
ಚತುರ್ದಿವಸದಲ್ಲಿಯೂ ಶರಣನೊಬ್ಬನೇ
ಚರಿಸುವ ಕೇಟೇಶ್ವರನ ಕರುಣದಲ್ಲಿ.
ಆ ಚತುರ್ದಿವಸದಲ್ಲಿಯೂ ಆಚರಿಸುವ
ಶರಣನ ನಿಲವ ಕಂಡು ಮತ್ತೆ ಗೋಣಿಯ ಮರೆಯಿಲ್ಲ;
ಇವ ಕುರಿತು ಅನುಸರಿಸದೆ ಆಚರಿಸುತಿಪ್ಪನು.
Art
Manuscript
Music
Courtesy:
Transliteration
Saṅgakke śaraṇara saṅgavē lēsayya,
jaṅgamadarivu liṅgada nilava tōruvudāgi,
liṅgada nilavāvudendaḍe:
Nūra nilisi, āra mīri, hadineṇṭa kaḷedu,
ēḷanuḷidu, ombattu mīri,
nijajaṅgamada nijaliṅgada nijaśaraṇara arivu.
Ī trividhada niruge entendaḍe:
Tattvajñānada nuḍiyalli hogadu.
Adentendaḍe: Nim'ma bhikṣada bhittiya hēḷuve.
Bhikṣe mūru vidhavāgippudu.
Bhikṣe ēḷuvidhavāgippudu.
Bhikṣe hannaraḍuvidhavāgippudu.
Bhikṣada nirugeya balla nijavīradēvayya.
Ātana arivanuṇṭumāḍikoṇḍu
ācarisuva carajaṅgamada arivina
tr̥ptiyāvudendaḍe:
Kṣārava kaṇḍu vibhramaṇanantirabēku
idu krīgāgadendu kaṅgeḍalēke?
Caturdivasadalliyū śaraṇanobbanē
carisuva kēṭēśvarana karuṇadalli.
Ā caturdivasadalliyū ācarisuva
śaraṇana nilava kaṇḍu matte gōṇiya mareyilla;
iva kuritu anusarisade ācarisutippanu.