Index   ವಚನ - 1    Search  
 
ಅರಗಿನ ತೇಜಿಯ ಮೇಲೆ ಉರಿಯ ಹಿರಿಯರಸು ಮೂರ್ತಿಗೊಂಡಿರಲು ಮಂಜಿನ ಪರಿವಾರ ಸಂದಣಿಸಿ ಸಂತೈಸಿ ಅವರಂಗಕ್ಕೆ ಬಿಸಿಲಿನ ಜೋಡ ತೊಡಿಸಿ ತಾ ತುರಂಗದ ಮೇಲೆ ಪಶುತಮವೆಂಬ ಖಂಡೆಯವ ಪಿಡಿದು ಚಂಡಿಕಾಕಿರಣದ ಮೇಲೆ ಅಂಗೈಸಿ ಏರಲಾಗಿ ಫೌಜು ಬೆರಸಿತ್ತು. ಉರಿಯರಸು ಎತ್ತಿದ ಖಂಡೆಯ ವರುಣನ ಕಿರಣದೊಳಗೆ ಬಯಲಾಯಿತ್ತು. ಮಂಜಿನ ಪರಿವಾರ ಆ ರಂಜನೆಯೊಳಡಗಿತ್ತು. ಉರಿಯರಸು ವಾಯುವಿನ ಸಿರಿಯೊಳಗಾದ. ಅರಗಿನ ಅಶ್ವ ಅರಸಿನ ತೊಡೆಯೊಳಗೆ ಹರಿಯಿತ್ತು. ಇಂತೀ ದೊರೆಗೆ ಅರಿ ಇದಿರಿಲ್ಲಾ ಎಂದು ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗಕ್ಕೆ ಇದಿರಿಲ್ಲಾ ಎನುತಿರ್ದೆ.