Index   ವಚನ - 7    Search  
 
ಬ್ರಹ್ಮಾಂಡದಲ್ಲಿ ಒಂದು ಪಿಂಡ ಹುಟ್ಟಿ ಕರ್ಮಾಂಡದಿಂದ ಬೆಳೆವುತ್ತಿದೆ ನೋಡಾ! ವಸುದಳವೆಂಬ ತೆರಲಿವಿಡಿದು ನಡೆವುತ್ತಿರಲಾಗಿ, ಮಹೀತಳನ ಜಡೆ ಸೀದು ಮರೀಚಿಕನ ಶಿರ ಬೆಂದು ರುದ್ರನ ತ್ರಿವಿಧ ಕಣ್ಣು ಮುಚ್ಚಿತ್ತು. ಇಂತಿವು ನಿರ್ಧರವಾದಲ್ಲಿ ಅರಿಗೊಡಲಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗಕ್ಕೆ ಇದಿರಿಲ್ಲಾ ಎನುತಿರ್ದೆ.