Index   ವಚನ - 6    Search  
 
ನಾ ನಿನ್ನ ಕೇಳಿಹೆನೆಂದಡೆ ನಾನಂಗಿ ನೀ ನಿರಂಗಿ. ನಾ ನಿನಗೆ ಹೇಳಿಹೆನೆಂದಡೆ ನಾ ಸಂಗಿ ನೀ ನಿಸ್ಸಂಗಿ. ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ ಎನ್ನಂಗ ನಿನ್ನಂಗದಲ್ಲಿ ಪ್ರೇರಿಸಿ ನಿನ್ನರಿವು ಎನ್ನ ಆತ್ಮದಲ್ಲಿ ನಿಂದು ಅರಿವಹನ್ನಕ್ಕ ನನಗೂ ನಿನಗೂ ತತ್ತುಗೊತ್ತು. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು ಸರಿ ಹುದುಗು.