ಅಂಡಜ ಮುಗ್ಧೆಯ ಮಕ್ಕಳಿರಾ,
ಕೆಂಡದ ಮಳೆ ಕರೆವಲ್ಲಿ
ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ!
ಜಂಗಮವೆಂಬುದಕ್ಕೆ ನಾಚಿರಿ.
ನಿಮ್ಮ ಕಂಗಳ ಹಿಂಡಿರ ತಿಂಬಳೆಂಬುದನರಿಯಿರಿ.
ಅವಳು ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು.
ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾ
ಜಂಗಮವೆ?
ಲೋಕವೆಲ್ಲಾ ಅವಳು.
ಅವಳು ವಿರಹಿತವಾದ ಜಂಗಮವಾರೈ ಬಸವಣ್ಣ?
ಅವಳು ವಿರಹಿತವಾದ ಭಕ್ತರಾರೈ ಬಸವಣ್ಣ?
ಅವಳ ಮಕ್ಕಳು ನಿನ್ನ ಕಯ್ಯಲ್ಲಿ
ಆರಾಧಿಸಿಕೊಂಬ ಜಂಗಮ ಕಾಣೈ ಬಸವಣ್ಣಾ !
ಅವಳು ವಿರಹಿತವಾದ ಚಿಕ್ಕಯ್ಯಪ್ರಿಯ ಸಿದ್ಧಲಿಂಗನಲ್ಲದಿಲ್ಲ,
ನಿಲ್ಲು ಮಾಣು.