Index   ವಚನ - 19    Search  
 
ಆಚಾರ್ಯ ಕುಟಿಲವ ಕೊಟ್ಟು ಹೋದನಲ್ಲಾ! ಮಹೇಂದ್ರಜಾಲದೊಳಗೆ ಭ್ರಾಂತರಾದರೆಲ್ಲರು. ಆಚಾರ್ಯನ ಸುಟ್ಟುರುಹಿದೆ, ಕುಟಿಲವ ಮೆಟ್ಟಿಯೊರಸಿದೆ! ಎನಗೆ ಆಚಾರ್ಯನಿಲ್ಲದೆ ಹೋಯಿತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.